ವಿಕಿಪೀಡಿಯ:FAQ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನಗೆ ಕನ್ನಡ ಅಕ್ಷರಗಳು ಕಾಣುತಿಲ್ಲ[ಬದಲಾಯಿಸಿ]

Please visit Kannada Support page for a comprehensive document on how to setup Kannada on your desktop.

ನಾನು ಕನ್ನಡ ಲಿಪಿಯನ್ನು ಹೊಂದಿದ್ದೇನೆ ಆದರೆ ಒತ್ತಕ್ಷರ ತೋರಿಸುವ ಬದಲು ಸಂಪೂರ್ಣ ತೋರಿಸುತ್ತಿದೆ.[ಬದಲಾಯಿಸಿ]

Kannada Wikipedia uses Unicode and to render Kannada. Unicode text requires that you install a ‘smart’ font technology which takes care of rendering conjuncts, half-consonants (vattus), glyph substitutions (like for arkavattu), etc. On Windows and Linux, you should use OpenType, on Apple Macs, use AAT. See Kannada Support for further Mac information. With OpenType, it is also required that you use a web browser with explicit OpenType support. Merely having installed the Kannada OpenType font is not enough.
The following browsers support Opentype fonts:

  • Any browser on Windows XP & above
  • IE6 on Windows 98 with arabic & Indic support
  • Konqueror on KDE 3.2 and above
  • Mozilla/Firefox compiled with pango (on Linux)

If you are using any of the browser/platforms not supporting OpenType fonts and have installed the Kannada OpenType fonts, you will not see the vattu's or half-consonants. Instead, you will see the full characters since this is how the data is stored.

To solve these issues, please refer to the Kannada Support Page.
To know more about the problem, refer to:


This Question was first asked on the wikipedia-kn mailing list

ಏನಿದು ಕನ್ನಡ ವಿಶ್ವಕೋಶ ಅಥವಾ ಕನ್ನಡ ವಿಕಿಪೀಡಿಯ?[ಬದಲಾಯಿಸಿ]

ವಿಕಿಪೀಡಿಯ ಮುಕ್ತವಾಗಿರಿಸಿದ ಜ್ಞಾನದ ಕಣಜ. ಇಲ್ಲಿ ನಿಮಗೆ ತಿಳಿದದ್ದನ್ನು ಮುಕ್ತವಾಗಿ ಜನರ ಮುಂದಿಡಬಹುದು, ಹಾಗು ಇತರರು ಪೇರಿಸಿಟ್ಟ ಲೇಖನಗಳನ್ನು ಓದಬಹುದು. ಎಲ್ಲ ಲೇಖನಗಳೂ ಎಲ್ಲರಿಂದಲೂ ಬದಲಾಯಿಸಲು ಸಾಧ್ಯವಿರುವಂಥದ್ದು. ಇಲ್ಲಿರುವ ಪ್ರತಿ ಲೇಖನವೂ ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಕೆಳಗೆ ಉಚಿತವಾಗಿ ಲಭ್ಯವಿದೆ.

ನಾನೂ ಕೂಡ ಇಲ್ಲಿ ಬರೆಯಬಹುದೆ?[ಬದಲಾಯಿಸಿ]

ಖಂಡಿತವಾಗಿ! ವಿಕಿಪೀಡಿಯಾದಲ್ಲಿ ಪ್ರತಿಯೊಬ್ಬರೂ ಬರೆಯಬಹುದು, ಲೇಖನಗಳನ್ನು ತಿದ್ದಬಹುದು, ಬದಲಾವಣೆ ಮಾಡಬಹುದು. ಆದರೆ, ಸದಸ್ಯರ ಸೌಜನ್ಯ ಹಾಗೂ ವಿವೇಕದಿಂದ ಸಮುದಾಯ ಮುನ್ನಡೆಯುತ್ತದೆ ಎಂಬುದನ್ನು ಗಮನದಲ್ಲಿಡಿ. ಮುಕ್ತವಾಗಿರಿಸಿರುವುದರ ದುರುಪಯೋಗ ಪಡಿಸಿಕೊಳ್ಳುವವರ ಮೇಲೆ ಹಲವು ಕ್ರಮಗಳು ಕೈಗೊಳ್ಳಲಾಗುವುದು. ಆದರೆ ಅಂತಹ ಸದಸ್ಯರು ಸದಭಿರುಚಿಯ ಸಮುದಾಯಗಳಲ್ಲಿ ಕಡಿಮೆ ಇರುವುದರಿಂದ ಅಂತಹ ಸನ್ನಿವೇಶ ಬಹುಶಃ ಬರದು. ಯಾವುದರ ಬಗ್ಗೆ ಬರೆಯಲಿ?, ಏನು ಬರೆಯಲಿ?ನಿಮಗೆ ಬರೆಯಲು ವಿಷಯಗಳು ಹೊಳೆಯದಿದ್ದಲ್ಲಿ ಸಮುದಾಯ ಪುಟ ನೋಡಿ. ಅಲ್ಲಿ ಕೆಲವು ಬೇಕಾಗಿರುವ ಲೇಖನಗಳ ಪಟ್ಟಿ ಮಾಡಲಾಗಿದೆ. ಈಗ ವಿಶ್ವಕೋಶದಲ್ಲಿರದ ಯಾವುದಾದರೂ ವಿಷಯದ ಬಗ್ಗೆ ಬರೆಯಲು ಪ್ರಾರಂಭ ಮಾಡಿ ಅಥವಾ ಇರುವ ಲೇಖನಗಳಿಗೇ ಹೆಚ್ಚು ಮಾಹಿತಿಯನ್ನು ಸೇರಿಸಿ.

ಹೇಗೆ ಪ್ರಾರಂಭ ಮಾಡುವುದು?[ಬದಲಾಯಿಸಿ]

ಸಮುದಾಯ ಪುಟದಲ್ಲಿ ಮಾಡಬೇಕಾಗಿರುವ ಕಾರ್ಯಗಳು ಹಾಗೂ ಸಂಪಾದಿಸಬೇಕಾಗಿರುವ ಲೇಖನಗಳ ಪಟ್ಟಿಯನ್ನು ಮಾಡಲಾಗಿದೆ. ವಿಷಯವನ್ನಾರಿಸಿಕೊಂಡು ಆಯಾ ಸಂಪರ್ಕವನ್ನು ಕ್ಲಿಕ್ ಮಾಡಿ ಬದಲಾಯಿಸಿ. ವಿಕಿಯಲ್ಲಿರುವ ಲೇಖನಗಳನ್ನು ಎಲ್ಲರೂ ಸಂಪಾದಿಸಬಹುದು. ಆದರೆ ಸದಸ್ಯರಾಗಿ ಬದಲಾವಣೆ ಮಾಡಿದಲ್ಲಿ ಒಳ್ಳೆಯದು. ಸದಸ್ಯರಾಗಲು ನಿಮ್ಮ ಪುಟದ ಬಲಭಾಗದ ಮೇಲಿನಂಚಿನಲ್ಲಿರುವ 'ಲಾಗಿನ್' ಸಂಪರ್ಕವನ್ನು ಕ್ಲಿಕ್ ಮಾಡಿ.

ಹೊಸ ವಿಷಯಗಳ ಬಗ್ಗೆ ಬರೆಯಲಾಗದೇ? ತೊಂದರೆ ಇಲ್ಲ. ವಿಶ್ವಕೋಶದಲ್ಲಿ ಈಗಿರುವ ಪುಟಗಳನ್ನು ಓದಿ, ಅದಕ್ಕೆ ಇನ್ನಷ್ಟು ಮಾಹಿತಿ ಸೇರಿಸಬಹುದು. ಈಗಿನಂತೆ ವಿಶ್ವಕೋಶದಲ್ಲಿರುವ ಪುಟಗಳ ಪಟ್ಟಿಗೆ ಈ ಪುಟ ನೋಡಿ.

ವಿಕಿ ನಿಮಗೆ ಹೊಸತಿರಬಹುದು. ವಿಕಿಯಲ್ಲಿ ಸಂಪಾದನೆ ಮಾಡಲು ಸಹಾಯಕ್ಕಾಗಿ ಈ ಪುಟ ನೋಡಿ.

ಇದಕ್ಕೇನಾದರೂ ಮೇಯ್ಲಿಂಗ್ ಲಿಸ್ಟ್ ಇರುವುದೆ? ಇದರ ಬಗ್ಗೆ ಚರ್ಚೆ ನಡೆಯುತ್ತದೆಯೇ?[ಬದಲಾಯಿಸಿ]

ಕನ್ನಡ ವಿಶ್ವಕೋಶದ ಬಗೆಗಿನ ಚರ್ಚೆಗೆ ಈ ಅಂಚೆ ಪೆಟ್ಟಿಗೆ ಹುಟ್ಟು ಹಾಕಲಾಗಿದೆ. ಇದುವರೆಗೆ ನಡೆದ ಚರ್ಚೆಗಳನ್ನು ನೀವು ಇಲ್ಲಿ ಓದಬಹುದು.

ಇವೆಲ್ಲದರ ಉಪಯೋಗವೇನು?[ಬದಲಾಯಿಸಿ]

  • ಕನ್ನಡ ಭಾಷೆಯ ಏಳಿಗೆ
  • ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಹೆಚ್ಚು ಉತ್ಸಾಹ ಮೂಡಿಸಲು ಒಂದು ಸಾಧನ
  • ಈಗಿನ ಪೀಳಿಗೆಯಷ್ಟೆ ಅಲ್ಲದೆ, ಮುಂದಿನ ಪೀಳಿಗೆಗಳಿಗೆ, ಮಾಹಿತಿಯು ಕನ್ನಡದಲ್ಲೇ ದೊರಕುವುದು.
  • ಸಮಗ್ರ ಮಾಹಿತಿಯು ಯೂನಿಕೋಡ್ ರೂಪದಲ್ಲಿರುವುದರಿಂದ ಯಾವುದೇ ಸರ್ಚ್ ಇಂಜಿನ್‍ಗಳ ಮೂಲಕ ಮಾಹಿತಿಯನ್ನು ಹುಡುಕಬಹುದು.
  • ಒಂದು ಮುದ್ರಿತ ವಿಶ್ವಕೋಶದಲ್ಲಿನ (encyclopedia) ಎಲ್ಲಾ ಉಪಯೋಗಗಳು, ಉಚಿತವಾಗಿ, ಅಂತರ್ಜಾಲದಲ್ಲಿ ಲಭ್ಯ.

ಕೆಲವೊಂದು ಲೇಖನಗಳ ಹೆಸರಿನಲ್ಲಿ ಆವರಣ ಚಿಹ್ನೆಯ ಒಳಗಿರುವ ಪದದ ಅವಶ್ಯಕತೆ ಏನು? ಇದರಿಂದ ಏನು ಉಪಯೋಗ?[ಬದಲಾಯಿಸಿ]

ದ್ವಂದ್ವ ನಿವಾರಣೆಗಾಗಿ ಲೇಖನದ ಹೆಸರನ್ನು ಭಿನ್ನವಾಗಿರುವಂತೆ ಬದಲಾಯಿಸಬೇಕಾಗುತ್ತದೆ. ಆಂಗ್ಲ ವಿಕಿಪೀಡಿಯದಲ್ಲಿನ ಈ ಪುಟ ನೋಡಿ.
ಇದನ್ನು ಆಂಗ್ಲದಲ್ಲಿ 'Disambiguation' ಎನ್ನುವರು. ಕನ್ನಡದಲ್ಲಿ 'ದ್ವಂದ್ವ ನಿವಾರಣೆ' ಎನ್ನಬಹುದು.
ಉದಾ: ಧೂಮಕೇತು ಖಗೋಳ ವಸ್ತು - ಧೂಮಕೇತು ಚಲನಚಿತ್ರ
ಉಪೇಂದ್ರ ನಟ/ನಿರ್ದೇಶಕ - ಉಪೇಂದ್ರ ಚಲನಚಿತ್ರ
ಚದುರಂಗ ಸಾಹಿತಿ - ಚದುರಂಗ ಆಟ - ಚದುರಂಗ ಚಲನಚಿತ್ರ

ಲೇಖನದಲ್ಲಿ ಪರಿವಿಡಿ (index) ಹಾಕುವುದು ಹೇಗೆ?[ಬದಲಾಯಿಸಿ]

ಲೇಖನದಲ್ಲಿ ಮೂರಕ್ಕಿಂತ ಹೆಚ್ಚಿನ ವಿಭಾಗಗಳಿದ್ದಾಗ, ಪರಿವಿಡಿಯು (index) ತನ್ನಷ್ಟಕ್ಕೆ ತಾನೆ ರೂಪುಗೊಳ್ಳುತ್ತದೆ.
ವಿಭಾಗಗಳನ್ನು ಮಾಡುವುದಕ್ಕೆ ಈ ಮಾದರಿ ಉಪಯೋಗಿಸಿ:
==ವಿಭಾಗದ ಹೆಸರು ==

ನನ್ನ ಸಹಿಯನ್ನು ಹಾಕುವುದು ಹೇಗೆ?[ಬದಲಾಯಿಸಿ]

ನಾಲ್ಕು ಬಾರಿ ಟಿಲ್ಡೆ(~) ಅಕ್ಷರವನ್ನು ಹಾಕಿದರೆ, ನಿಮ್ಮ ಸಹಿಯು ಸಿದ್ಧವಾಗುತ್ತದೆ.
ಹೀಗೆ ಹಾಕಿ: ~~~~

ಸಹಿಯನ್ನು ಎಲ್ಲಿ ಹಾಕಬೇಕು? ಎಲ್ಲಿ ಹಾಕಬಾರದು?[ಬದಲಾಯಿಸಿ]

ಸಹಿಯನ್ನು ಲೇಖನದ ಪುಟದಲ್ಲಿ ಹಾಕಕೂಡದು.
ಲೇಖನದ ಚರ್ಚೆಯ ಪುಟದಲ್ಲಿ (Talk Page) ನಿಮ್ಮ ಟಿಪ್ಪಣಿಯ ನಂತರ ಹಾಕಬೇಕು.

ಚರ್ಚಾಪುಟದಲ್ಲಿ ಸಹಿಯನ್ನು ಹಾಕುವ ಉದ್ದೇಶವೇನು?[ಬದಲಾಯಿಸಿ]

ಚರ್ಚೆಯಲ್ಲಿ ಭಾಗವಹಿಸಿರುವರಿಗೆ, ಹಾಗು ಚರ್ಚೆಯನ್ನು ಗಮನಿಸುವವರಿಗೆ, ಚರ್ಚೆಯಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗುತ್ತದೆ.

ಆಂತರಿಕ ಸಂಪರ್ಕ[ಬದಲಾಯಿಸಿ]

ಆಂತರಿಕ ಸಂಪರ್ಕ ಎಂದರೇನು?[ಬದಲಾಯಿಸಿ]

ವಿಕಿಪೀಡಿಯದ ಒಂದು ಪುಟದಿಂದ ಇನ್ನೊಂದು ಪುಟಕ್ಕೆ ಸಂಪರ್ಕವನ್ನೀಯುವ ಸಾಧನ. ಇದನ್ನು ಆಂಗ್ಲದಲ್ಲಿ ವಿಕಿಲಿಂಕ್(wikilink) ಅಥವಾ ಇಂಟರ್‍ನಲ್ ಲಿಂಕ್(internal link) ಎಂತಲೂ ಕರೆಯುತ್ತಾರೆ. ಸಂಪರ್ಕಗೊಂಡ ಲೇಖನವು ಈಗಾಗಲೇ ಇದ್ದಲ್ಲಿ, ಸಂಪರ್ಕವು ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. ಲೇಖನವು ಇಲ್ಲದಿದ್ದಲ್ಲಿ ಸಂಪರ್ಕವು ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ.

ಆಂತರಿಕ ಸಂಪರ್ಕದ ಮಹತ್ವವೇನು?[ಬದಲಾಯಿಸಿ]

ವಿಕಿಪೀಡಿಯ ಕಾರ್ಯನೀತಿಗಳ ಪ್ರಕಾರ, ಒಂದು ಲೇಖನದ ಮೌಲ್ಯ ಅದು ಎಷ್ಟು ಆಂತರಿಕ ಸಂಪರ್ಕಗಳನ್ನು ಒಳಗೊಂಡಿದೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಅಂದರೆ, ಲೇಖನದ ಗಾತ್ರದ ಮೇಲಾಗಲಿ, ಅದನ್ನು ಎಷ್ಟು ಬಾರಿ ಓದಲ್ಪಡಲಾಗಿದೆ ಎನ್ನುವುದರ ಮೇಲಾಗಲಿ ಲೇಖನದ ಮೌಲ್ಯ ನಿರ್ಧಾರವಾಗುವುದಿಲ್ಲ. ಜೊತೆಗೆ, ಒಂದೂ ಆಂತರಿಕ ಸಂಪರ್ಕವಿಲ್ಲದ ಲೇಖನವನ್ನು ವಿಕಿ ಸಂಪ್ರದಾಯದಲ್ಲಿ ವಿಶ್ವಕೋಶದ ಅಧಿಕೃತ ಲೇಖನ ಎಂದು ಪರಿಗಣಿಸುವುದೇ ಇಲ್ಲ. ಯಾವುದನ್ನು ಲೇಖನವೆಂದು ಪರಿಗಣಿಸಲಾಗುತ್ತದೆ ಎಂಬುದಕ್ಕೆ ಆಂಗ್ಲ ವಿಕಿಯಲ್ಲಿನ ಈ ಲೇಖನ ನೋಡಿ.

ಆದ್ದರಿಂದ, ಆಂತರಿಕ ಸಂಪರ್ಕಗಳನ್ನು ಎಲ್ಲೆಲ್ಲಿ ಸಾಧ್ಯವೋ, ಅಲ್ಲಿ ಅಗತ್ಯವಾಗಿ ಬಳಸಿ. ಯಾವ ಪದಗಳಿಗೆ ಆಂತರಿಕ ಸಂಪರ್ಕ ಕೊಡಬಹುದು ಎಂಬುದು ತಿಳಿಯಲು ಒಂದು ಸುಲಭವಾದ ವಿಧಾನವೆಂದರೆ, ಬಹುತೇಕ ಎಲ್ಲಾ ಅಂಕಿತನಾಮಪದಗಳಿಗೆ (proper nouns) ಆಂತರಿಕ ಸಂಪರ್ಕ ಕೊಡಬಹುದು. ಉದಾ: ಹುಬ್ಬಳ್ಳಿ, ಭಾರತ, ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಕ್ರಿಕೆಟ್, ಗಣಕಯಂತ್ರ, ಶಾಸ್ತ್ರೀಯ ಸಂಗೀತ ಇತ್ಯಾದಿ.

ಆಂತರಿಕ ಸಂಪರ್ಕವನ್ನು ಹೇಗೆ ಹಾಕುವುದು?[ಬದಲಾಯಿಸಿ]

ಆಂತರಿಕ ಸಂಪರ್ಕವು ಈ ಮಾದರಿಯಲ್ಲಿರುತ್ತದೆ. [[ಪುಟದ ಹೆಸರು|ಸಂಪರ್ಕದ ಹೆಸರು]]
ಉದಾಹರಣೆ: [[ಕರ್ನಾಟಕ|ಕರ್ನಾಟಕದಲ್ಲಿನ]]

ಸಂಪರ್ಕದ ಹೆಸರು ಹಾಗು ಪುಟದ ಹೆಸರು ಎರಡೂ ಒಂದೇ ಇದ್ದಲ್ಲಿ, ಒಂದನ್ನು ಮಾತ್ರ ಉಪಯೋಗಿಸಬಹುದು. ಆಗ ಪೈಪ್ (|) ಚಿಹ್ನೆಯ ಅಗತ್ಯವಿರುವುದಿಲ್ಲ. ಅಂದರೆ ಹೀಗೆ [[ಸಂಪರ್ಕದ ಹೆಸರು]]
ಉದಾಹರಣೆ: [[ಕುವೆಂಪು]]

Template (ಟೆಂಪ್ಲೇಟು) ಅಂದರೇನು?[ಬದಲಾಯಿಸಿ]

ಟೆಂಪ್ಲೇಟು (Template) ಅಂದರೆ, ವಿವಿಧ ಲೇಖನಗಳಲ್ಲಿ ಮತ್ತೆ ಮತ್ತೆ ಉಪಯೋಗಿಸಬಹುದಾದಂತಹ ಸಾಧನ ("Reusable component"). ಕೆಲವು ಪದಗಳನ್ನು, ಅಥವಾ ವಾಕ್ಯಗಳನ್ನು ಹಲವಾರು ಲೇಖನಗಳಲ್ಲಿ ಉಪಯೋಗಿಸುವಂತಹ ಸಂದರ್ಭದಲ್ಲಿ, ಆ ಎಲ್ಲಾ ಲೇಖನಗಳಲ್ಲಿ ಬರೆಯುವುದಕ್ಕಿಂತ, ಅದೇ ವಿಷಯವನ್ನು ಒಂದು ಟೆಂಪ್ಲೇಟಿಗೆ ಹಾಕಿ, ಆ ಟೆಂಪ್ಲೇಟಿನ ಹೆಸರನ್ನು ಮಾತ್ರ ಲೇಖನದಲ್ಲಿ ಹಾಕುವ ಸೌಲಭ್ಯ ವಿಕಿಪೀಡಿಯ ಮಾಡಿಕೊಟ್ಟಿದೆ. ಹಾಗೆ ಮಾಡಿದಾಗ, ಟೆಂಪ್ಲೇಟಿನಲ್ಲೇನಿದೆಯೋ, ಅದು ಲೇಖನಗಳಲ್ಲಿ ಬರುತ್ತದೆ.

ಉದಾ: Template:ಸುಸ್ವಾಗತ. ಇದನ್ನು, ಹೊಸದಾಗಿ ಸೇರುವ ಎಲ್ಲಾ ಸದಸ್ಯರಿಗೆ ತಿಳಿಸುವ ಮಾಹಿತಿಯಾಗಿ ರೂಪಿಸಲಾಗಿದೆ. ಹೊಸ ಸದಸ್ಯರ ಚರ್ಚೆಪುಟದಲ್ಲಿ {{ಸುಸ್ವಾಗತ}} ಎಂದು ಹಾಕಿದರಾಯಿತಷ್ಟೆ. ಟೆಂಪ್ಲೇಟಿನಲ್ಲಿರುವ ಸಂಪೂರ್ಣ ಮಾಹಿತಿಯು ಟೆಂಪ್ಲೇಟನ್ನು ಉಪಯೋಗಿಸಿದ ಪುಟದಲ್ಲಿ ಬರುತ್ತದೆ.

ಟೆಂಪ್ಲೇಟಿನ ಬಗ್ಗೆ, ಮತ್ತು ಅದರಲ್ಲಿನ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಗೆ Template ಸಹಾಯ ಪುಟ ನೋಡಿ.

Category (ವರ್ಗ) ಅಂದರೇನು?[ಬದಲಾಯಿಸಿ]

ವರ್ಗ (Category) ಅಂದರೆ, ಸಂಬಂಧಪಟ್ಟ ಲೇಖನಗಳ ಒಂದು ಗುಂಪು.

ಒಂದು ಲೇಖನವನ್ನು ವರ್ಗಕ್ಕೆ ಸೇರಿಸುವುದು ಹೇಗೆ?[ಬದಲಾಯಿಸಿ]

ಲೇಖನದ ಕೊನೆಯಲ್ಲಿ ಈ ಸಾಲನ್ನು ಸೇರಿಸಿ. [[ವರ್ಗ:ವರ್ಗದ ಹೆಸರು]]

ಅಥವಾ [[Category:ವರ್ಗದ ಹೆಸರು]]

ಉದಾ: [[ವರ್ಗ:ಸಾಹಿತಿಗಳು]]

ಒಂದು ಲೇಖನವನ್ನು ಎಷ್ಟು ವರ್ಗಗಳಿಗೆ ಸೇರಿಸಬಹುದು?[ಬದಲಾಯಿಸಿ]

ಎಷ್ಟು ವರ್ಗಗಳಿಗಾದರೂ ಸೇರಿಸಬಹುದು. ಇದಕ್ಕೆ ಗರಿಷ್ಟ ಮಿತಿಯಿಲ್ಲ. ಆದರೆ, ಲೇಖನವು ಆಯಾ ವರ್ಗಕ್ಕೆ ಸೇರುತ್ತದೆಯಾ ಎಂದು ವಿವೇಚನೆ ನಡೆಸಿ ನಿರ್ಧರಿಸಿ.

ಒಂದಕ್ಕಿಂತ ಹೆಚ್ಚಿನ ವರ್ಗಗಳಿಗೆ ಸೇರಿಸುವುದು ಹೇಗೆ[ಬದಲಾಯಿಸಿ]

ವರ್ಗಕ್ಕೆ ಸೇರಿಸಲು ಉಪಯೋಗಿಸುವ ಸಾಲನ್ನು, ಒಂದರ ಕೆಳಗೊಂದು ಹಾಕುತ್ತಾ ಹೋಗಿ. [[ವರ್ಗ:ವರ್ಗದ ಹೆಸರು ೧]]
[[ವರ್ಗ:ವರ್ಗದ ಹೆಸರು ೨]]
[[ವರ್ಗ:ವರ್ಗದ ಹೆಸರು ೩]]

ಉದಾ: ಕುವೆಂಪು ಲೇಖನಕ್ಕೆ ಈ ರೀತಿ ವರ್ಗಗಳನ್ನು ಹಾಕಬಹುದು.

[[ವರ್ಗ:ಕವಿಗಳು ]]
[[ವರ್ಗ:ಸಾಹಿತಿಗಳು ]]
[[ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ]]
[[ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ]]

Please read this to know more - https://en.wikipedia.org/wiki/Wikipedia:HotCat --Ananth (CIS-A2K) (ಚರ್ಚೆ) ೦೯:೧೨, ೨೩ ಜನವರಿ ೨೦೨೦ (UTC)